ಅಂಡಜಾಧಿಪ ತುರಗ ಹರಿ ಭಕುತರ
ರಘುವೀರಕರಕಮಲ ಸಂಜಾತರ
ಸುಗುಣಾಂತರಂಗ ಯತಿಶ್ರೇಷ್ಠರ |
ರಘುರಾಮಪದಭಜಕ ಸುಚರಿತ್ರರ
ಮಿಗೆ ಭಕುತಿಜ್ಞಾನ ವೈರಾಗ್ಯರ ||
ಬೇಡಿದಂಥ ಕಾಮಿತ ಕೊಡುವರಾ
ರೂಢಿಯೊಳಗಪ್ರತಿಮ ಆನಂದರ |
ಜೋಡಿಸುವೆ ಕರಗಳನು ಯತಿವರ್ಯರ
ಜೋಡಿಪಾದಕೆ ಇಂದು ನಾ ಮಣಿಯುತ ||
ಮಾನವೀ ಪುರದೊಳಗೆ ಇರುವರಾ ಮಹಿಮರ
ಸಾನುರಾಗದಿ ಸುಜನರ ಪೊರೆವರಾ |
ಏನು ಸುಕೃತವೋ ನಾ ಕಂಡೆನಿವರಾ
ಮಾನ್ಯ ಪಂಢರಿನಾಥ ವಿಠ್ಠಲದಾಸರಾ ||