ಆ ರಘುವೀರಕರೋತ್ಥರ ಕೋದಂಡ

ಶ್ರೀರಾಮನ ಪದ ವಾರಿಜ ಮಧುಪರ


ರಾಮಾರ್ಯರ ಸುತರೆನಿಸಿ ದ್ವಿಜತ್ವದ ನೇಮಗೈದು ಮೇಲಾಗಿ

ಸತ್ಕಾಮಿನಿಯ ಮದುವೆಯಾಗಿ ಭೂಮೀಶನ ಸೈನ್ಯದಲಿದ್ದು

ಕಾರ್ಯವ ತಾಮಸವಿಲ್ಲದೇ ನಡಿಸಿ ಅಧಿಕಾರಿಯ ಪ್ರೀತಿಯ ಪಡಿಸಿ |

ಶ್ರೀಮನೋಹರನು ಮಹಿಮೆ ತೋರಲು ವಿರಾಮವ ಗೊಳಿಸಿದ ರುದ್ಯೋಗವಗಡ II೧II


ವರಕೂಡಲಿ ರಘುವೀರತೀರ್ಥರನು ಶರಣು ಪೊಂದುತಲಿ ಸಾಗಿ |

ಯತ್ಯಾಶ್ರಮ ತಳೆದು ಚೆನ್ನಾಗಿ |

ಹರಿಪರನೆಂದರುಹುತ ಶಾಸ್ತ್ರವ ಭೂಸುರರಿಗುಣಿಸಿ |

ಮೃಷ್ಟಾನ್ನ ಗೈದರು ಸರ್ವಸ್ವವ ದಾನ ಧರೆಯೊಳು ಕಾರ್ಪರ ನರಹರಿಯ ಚರಣ ಸರಸಿಜ ಸೇವಿಸಿ ಪಡೆದರನುಗ್ರಹ ||೨||


ದೇಶ ದೇಶ ಸಂಚರಿಸುತ ಭಕುತರ ಆಸೆಯ ಪೂರ್ತಿಸಿದವರು

ಜಗದೀಶನ ಪ್ರೀತಿ ವಿಷಯರು ಲೇಸು ಜಗನ್ನಾಥದಾಸರ ಕಾಣುತ

ತೋಷದಿ ನಲಿದಾಡಿದರು ಪರವಶದಿ ಭಜನೆ ಮಾಡಿದರು

ಶ್ರೀಶವೇಂಕಟನ ಚರಣ ಸೇರುತಲಿ ಭಾಸುರ ಮಾನವಿ ಪುರದಿ ಹೊರಗಿರುವ ||೩||