ಸಾರಿದವರಘ ದೂರ ಮಾಡುವ ನಮ್ಮ ಧೀರ
ಶ್ರೀನಾರಾಯಣ ತೀರ್ಥರ ನಾಮವ
ಬಂಡಿಲಿ ಜನಿಸಿದರು ಇವರು ಕೋದಂಡರಾಮರ ಪ್ರಿಯರು|
ಕಂಡು ಇವರ ಪಾದ ಕೊಂಡಾಡಿದೊಡೆ
ಕುಂಡಲಿಶಯನ ಪಾಂಡುರಂಗ ತಾನೊಲಿವ
ಭೋಗಿಶಯನನ ಪಾದವ ಘನ್ನಯೋಗದಿ ಧ್ಯಾನಿಸುವ|
ರೋಗಹರರು ಕೃಪಾಸಾಗರರಿವರು ಶ್ರೀ-
ರಘುವೀರತೀರ್ಥರ ಕರಕಮಲ ಸಂಜಾತರು
ಘನ್ನಮಹಿಮರಿವರು ಚೆನ್ನಾಗಿ ತಮ್ಮ ದಾಸರ ಸಲಹುವರು |
ಮಾನಿತಮಾನವಿಕಾನನದೊಳು ರಂಗನಾಥನ
ಧ್ಯಾನದಿ ಕುಳಿತ ಸನ್ಮೌನಿ ಮುನಿಂದ್ರರ ನಾಮ