ಧಾರುಣಿಯೊಳು ರಘುವೀರತೀರ್ಥಕರ
ವಾರಿಜ ಭವರೆಂದೆನಿಸಿ ಮೆರೆದಾ ಗುರು
ಶ್ರೀರಾಮಾರ್ಯರ ಸತಿಯುದರದಿ ಜನಿಸಿ ದ್ವಿತಿಯಾಶ್ರಮದೊಳು
ಸ-ದ್ಭಾರ್ಯಾಪುತ್ರಾದಿಗಳಿಂದಲಿ ರಮಿಸಿ ಸಂಸಾರಸುಖವನು ಅ- |
ಸಾರ ಬಲು ಹೇಯವೆನುತ ಧಿಕ್ಕರಿಸಿ ತುರ್ಯಾಶ್ರಮ ವಹಿಸಿ
ಶ್ರೀರಾಮನ ಪದವಾರಿಜಯುಗ್ಮವ ಚಾರು ವಿಭವದಿಂದಾರಾಧಿಸಿದಾ||
ಶ್ರೀನಿವಾಸನ ಪ್ರತಿಮಗಳೆಂದೆನುತ ಮೃಷ್ಟಾನ್ನದಾನದಿಂ
ಕ್ಷೋಣೀವಿಬುಧರನು ಸದಾ ಮನ್ನಿಸುತ ಸನ್ಮಾನ ಮಾಡುತ |
ಜ್ಞಾನಕರ್ಮೇಂದ್ರಿಯದಿಂದಾಚರಿಸುತ ಕರ್ಮವನರ್ಪಿಸುತ
ಆನತಜನಸುರಧೇನು ಎಂದೆನಿಪ ಮಾನವಿರಾಯರ ಸ್ಥಾನದಿ ನೆಲೆಸಿಹ||
ಧಾತ್ರಿಯೊಳು ಕ್ಷೇತ್ರಗಳನು ಸಂಚರಿಸಿ ಮೂರ್ತಿಗಳನ್ನು ಚಿಂತಿಸಿ
ತೀರ್ಥಸ್ನಾನಾದಿಸುಕರ್ಮಾಚರಿಸಿ ಪಾತಕ ಪರಿಹರಿಸಿ |
ಮಾತರಿಶ್ವನ ಮತ ತತ್ತ್ವವ ತಿಳಿಸಿ ಛಾತ್ರರನುದ್ಧರಿಸಿ
ಖ್ಯಾತಕಾರ್ಪರಕ್ಷೇತ್ರದಿ ನರಮೃಗನಾಥನ ಪ್ರೀತಿಗೆ ಪಾತ್ರರೆನಿಸುವಾ ||